ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣವರು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದಾಗ ಕನ್ನಡದಲ್ಲಿಯೇ ಮಾತನಾಡಿ ಕರ್ನಾಟಕದ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ.
ಕಳೆದ ಬಾರಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡದಲ್ಲಿಯೇ ಮಾತನಾಡಿ ಕರ್ನಾಟಕ ಮಂದಿಯ ಮನಸು ಕದ್ದಿದ್ದರು.
ಅದರಂತೆ ಇದೀಗ ಮತ್ತೆ ಕನ್ನಡದಲ್ಲಿ ಮಾತಾಡಿ ಕರ್ನಾಟಕ ಜನರ ಮನಸ್ಸಲ್ಲಿ ಪವನ್ ಕಲ್ಯಾಣ್ ಅವರು ಮತ್ತಷ್ಟು ಬೇರೂರಿದ್ದಾರೆ.
ಹೌದು, ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕರ್ನಾಟಕ ಪ್ರಜೆಗಳಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಕರ್ನಾಟಕವು ಅದ್ಭುತ ಪರಂಪರೆ, ಸಂಸ್ಕೃತಿಯ ನಾಡು. ಚಿಂತಾಮಣಿಗೆ ಬಂದಿರೋದು ಗೌರವದ ವಿಷಯ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಣೆ ಮಾಡಿದ ಮುರ್ಮು
ಇನ್ನು ಕೋಲಾರ-ಚಿಕ್ಕಬಳ್ಳಾಪುರ ಬೆಂಗಳೂರಿಗೆ ಅಹಾರ ನೀಡುವ ಅಕ್ಷಯ ಪಾತ್ರೆಯಾಗಿದ್ದು, ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಲು ಸಹೋದರನಾಗಿ ಪ್ರಯತ್ನ ಮಾಡುವೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಪರಸ್ಪರ ಗೌರವದಿಂದ ಕೂಡಿದೆ. ಕಲೆ ಮತ್ತು ಸಂಸ್ಕೃತಿ ನಮ್ಮನ್ನ ಒಂದೂಗಿಡಿಸಬೇಕೇ ವಿನಃ ಬೇರ್ಪಡಿಸಿಬಾರದು. ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.

