ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಮಳೆರಾಯನ ಅರ್ಭಟಕ್ಕೆ ಒಂದಲ್ಲ ಒಂದು ತೊಂದರೆಗಳಾಗುತ್ತಿವೆ. ಅದರಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆರಾಯನ ಆರ್ಭಟಕ್ಕೆ ಒಳಚರಂಡಿಗಳಿಗೆ ಹೆಚ್ಚು ಕಸ ಸೇರಿರುವುದರಿಂದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಂ ಸತೀಶ್ ರೆಡ್ಡಿ ಅವರು, ಇಂದು (ಸೋಮವಾರ ಸೆ. 22) ಹೊಂಗಸಂದ್ರ ವಾರ್ಡ್ ವ್ಯಾಪ್ತಿಯಲ್ಲಿನ ಶಾಂತಿನಗರ, ಮುನಿಸುಬ್ಬ ರೆಡ್ಡಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಳಚರಂಡಿ ಹಾಗೂ ಸ್ವಚ್ಛತಾ ಸಮಸ್ಯೆಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳನ್ನು ಮಾತನಾಡಿದ ಅವರು, ತ್ವರಿತವಾಗಿ ಎಲ್ಲಾ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದ್ದು ಸ್ಥಳಿಯ ನಿವಾಸಿಗಳುಗೆ ಏನಾದರೂ ತೊಂದರೆ ಇದ್ದರೆ ಖುದ್ದು ನಮ್ಮನ್ನು ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು, ತಕ್ಷಣವೇ ನಿಮ್ಮ ಸಮಸ್ಯೆಗಳಿಗೆ ಪರಿಹರಿಸುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.
ಅಲ್ಲದೆ ಸ್ಥಳೀಯ ನಿವಾಸಿಗಳ ಜೊತೆ ಮಾತನಾಡಿ ಅವರ ತೊಂದರೆಗಳನ್ನು ಆಲಿಸಿದರು. ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವಂತೆ ಸ್ಪಷ್ಟ ಮಾರ್ಗದರ್ಶನ ನೀಡಿದರು. ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣವನ್ನು ರೂಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಬೊಮ್ಮನಹಳ್ಳಿ ಕ್ಷೇತ್ರದ ಪ್ರತಿಯೊಬ್ಬ ನಿವಾಸಿಗೂ ಶುಚಿ ಹಾಗೂ ಆರೋಗ್ಯಕರ ಪರಿಸರ ಒದಗಿಸುವುದು ನಮ್ಮ ಬದ್ಧತೆ. ನಿಮ್ಮ ಸಹಕಾರ ಹಾಗೂ ಅಭಿಪ್ರಾಯಗಳು ಸದಾ ನಮಗೆ ಅಮೂಲ್ಯ ಎಂದರು. ಇದನ್ನೂ ಓದಿ: ದಸರಾ ಎಂದರೆ ಕೇವಲ ಹಬ್ಬವಲ್ಲ, ಇದು ನಾಡಿನ ನಾಡಿ: ಬಾನು ಮುಷ್ತಾಕ್
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಟಿ.ರಾಮಚಂದ್ರ, ಬಿಬಿಎಂಪಿ ಅಧಿಕಾರಿಗಳು, BWSSB ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಹಾಗೂ ಮತ್ತಿತರರು ಇದ್ದರು.
Post Views: 9

