ಉಪೇಂದ್ರ, ಪ್ರಿಯಾಂಕ ಮೊಬೈಲ್ ಹ್ಯಾಕ್; ಕೊನೆಗೂ ಆರೋಪಿಗಳು ಯಾರೆಂದು ಪತ್ತೆ ಹಚ್ಚಿದ ಪೊಲೀಸರು

Praja vahini
1 Min Read


postviews: 15

ಬೆಂಗಳೂರು: ಇತ್ತೀಚಿಗೆಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಅವರ ಮೊಬೈಲ್ ಅನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡಿ ಹಣ ಪಡೆಯಲು ಹಂಚಹಾಕಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪೇಂದ್ರ ದಂಪತಿಗಳಿಬ್ಬರು ದೂರು ದಾಖಲಿಸಿದ್ದು, ಇದೀಗ 10 ದಿನಗಳ ಬಳಿಕ ಹ್ಯಾಕರ್ಸ್ಗಳ ಜಾಲವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಹೌದು, ಮೊಬೈಲ್​ ಹ್ಯಾಕ್​ ಮಾಡಿದ ಗ್ಯಾಂಗ್​ನನ್ನು ಸದಾಶಿವನಗರ ಠಾಣೆ ಪೊಲೀಸ್ರು ಪತ್ತೆ ಹಚ್ಚಿದ್ದಾರೆ. ಬಿಹಾರ ಮೂಲದ ಹ್ಯಾಕರ್ಗಳು ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿದರು. ಹ್ಯಾಕ್ ಮಾಡಿ, 1.65 ಲಕ್ಷ ರೂಪಾಯಿ ಮೊತ್ತವನ್ನು ಮೊದಲು 4 ನಕಲಿ ಬ್ಯಾಂಕ್ ಖಾತೆಗಳಿಗೆ, ನಂತರ ನಳಂದಾದ ಇನ್ನೊಂದು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ.

ಈ ಬಗ್ಗೆ ದೂರು ನೀಡಿದ ಪ್ರಿಯಾಂಕಾ ಉಪೇಂದ್ರ ಮತ್ತು ಉಪೇಂದ್ರ ಜಾಗೃತಿ ಮೂಡಿಸಲು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಎಲ್ಲ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದಿದ್ದು, ಹ್ಯಾಕರ್ಗಳನ್ನು ಬಂಧಿಸಲು ವಿಶೇಷ ತಂಡವನ್ನು ಬಿಹಾರಕ್ಕೆ ಕಳುಹಿಸಲು ಸಜ್ಜಾಗಿದೆ ಎಂದು ಡಿಸಿಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿಗಳಿಗೆ ಪ್ರಮುಖ ಕಾರಣವೇ ಹಿಂದಿನ ಬಿಜೆಪಿ ಸರ್ಕಾರ: ರಾಮಲಿಂಗಾ ರೆಡ್ಡಿ

ಪೊಲೀಸ್ ತನಿಖೆ ಪ್ರಕಾರ, ಹ್ಯಾಕರ್ಗಳು 1219279295167# ಬಳಸಿ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದರು. ಪ್ರಿಯಾಂಕ ಉಪೇಂದ್ರ ತನ್ನ ಮೊಬೈಲ್​ ಹ್ಯಾಕ್ ಆಗ್ತಿದ್ದಂತೆ ಅಲರ್ಟ್ ಆಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡೋದು 10 ನಿಮಿಷ ಯಾರಾರಿದರೆ ಹತ್ತು ಲಕ್ಷಕ್ಕೂ ಹೆಚ್ಚು ಹಣ ಸಂದಾಯವಾಗ್ತಿತ್ತು ಎನ್ನಲಾಗ್ತಿದೆ. ಸ್ನೇಹಿತರು ಕುಟುಂಬಸ್ಥರು ಎಲ್ಲರೂ ಹಣ ಹಾಕುವ ಬಗ್ಗೆ ರಿಟರ್ನ್ ಫೋನ್ ಮಾಡಿ ವಿಚಾರಿಸಿದ್ದಾರೆ. ಸದ್ಯ ಮತ್ತೊಮ್ಮೆ ಪ್ರಿಯಾಂಕ ಉಪೇಂದ್ರರಿಂದ ಬ್ಯಾಂಕ್ ಅಕೌಂಟ್​ಗಳ ಬಗ್ಗೆ ದಾಖಲೆ ಪಡೆದಿದ್ದಾರೆ.

source

Share This Article