ಒಗ್ಗಟ್ಟಿನಿಂದ ಸಂಘ ಮುನ್ನಡಿಸಿ

Praja vahini
1 Min Read


postviews: 76

ಶಹಾಪುರ: ಸುವರ್ಣ ಕಲ್ಯಾಣ ಕರ್ನಾಟಕ ಗುತ್ತಿಗೆದಾರರ ಸಂಘದ ತಾಲೂಕು ಘಟಕ ವತಿಯಿಂದ ಇಂದು (ಶುಕ್ರವಾರ ಅ. 03) ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಯಮುನಪ್ಪ ಆಗಸ್ಥಾಳ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಸಂಘದ ಸರ್ವರ ಒಮ್ಮತದ ಮೇರೆಗೆ ಸಂಘದ ಕಚೇರಿ, ಐ.ಡಿ ಕಾರ್ಡ್ ಹಾಗೂ ಮುಂದಿನ ಕಾರ್ಯ ಚಟುವಟಿಕೆಯ ಕುರಿತು ಚರ್ಚಿಸಿ ಮುಂದಿನ ಕಾರ್ಯಕ್ಕೆ ಮುನ್ನಡಿ ಬರೆಯಲಾಯಿತು. ಸರ್ವರ ಅಭಿಪ್ರಾಯ ಒಂದೇಯಾಗಿದ್ದರಿಂದ ಒಗ್ಗಟ್ಟಿನಿಂದ ಸಂಘ ಮುನ್ನಡಿಸಿಕೊಂಡು ಹೋಗಲು ಕರೆ ನೀಡಲಾಯಿತು.

ಈ ವೇಳೆ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗುತ್ತಿಗೆದಾರರು ಇದ್ದರು.

source

Share This Article