postviews: 9
ಬೆಂಗಳೂರು: ಕಳೆದ ವಾರದಿಂದ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಎದುರಾಗಿದ್ದರು ಕೂಡ ರಾಜ್ಯ ಸರ್ಕಾರ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿರುವ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ವಿಪರೀತ ಮಳೆಯಾಗುತ್ತಿರುವುದರಿಂದ ರೈತರು ಕಂಗೆಟ್ಟಿದ್ದಾರೆ. ರೈತರು ಬೆಳೆದ ಬೆಳೆಗಳೆಲ್ಲ ನೀರು ಪಾಲಾಗಿ ಕಣ್ಣೀರು ಹಾಕುತ್ತಿದ್ದಾರೆ. ತಹಶೀಲ್ದಾರರಿಗೆ ಲಿಮಿಟ್ ಏರಿಯಾ ಸರ್ವೇ ಮಾಡಿ ಅಂತ ಸರ್ಕಾರದಿಂದ ಸೂಚನೆ ಬಂದಿದೆ ಅಂತ ಹೇಳಲಾಗ್ತಿದೆ. ಸರ್ಕಾರ ಹೀಗೆ ಮಾಡಬಾರದು. ಎಲ್ಲಿ ಮಳೆ ಹಾನಿಯಾಗಿದೆ ಅಲ್ಲಿ ಸರ್ವೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ವಯೋಮಿತಿ ಸಡಿಲಿಕೆಯಲ್ಲಿ ಮಹತ್ವದ ನಿರ್ಧಾರ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರವಾಹ ಪೀಡಿತ ಸ್ಥಳಗಳಿಗೆ ಇಂದು (ಮಂಗಳವಾರ ಸೆ. 30) ಭೇಟಿ ನೀಡುತ್ತಿದ್ದಾರೆ. ಈ ಸರ್ಕಾರದಿಂದ ರೈತರಿಗೆ ನ್ಯಾಯ ಸಿಗೋ ವಿಶ್ವಾಸ ಇಲ್ಲ. ಮಳೆ ಹಾನಿಗೆ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ. ಕಳೆದ ಬಾರಿ ಅರ್ಧ ಜನರಿಗೆ ಪರಿಹಾರ ಬಿಡುಗಡೆ ಆಗಿಲ್ಲ. ಇನ್ನು ಹಾನಿಯ ಸರ್ವೆಯೇ ಮಾಡಿಲ್ಲ. ಹಾನಿಯಾದ ಎಲ್ಲಾ ಭಾಗದ ಸರ್ವೆಯನ್ನ ಸರ್ಕಾರ ಮಾಡಲು ಸೂಚನೆ ಕೊಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

