ಬೆಂಗಳೂರು: ಜೆಡಿಎಸ್ ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರಿಗೆ ಅತ್ಯಾಚಾರ ವ್ಯಸಗಿರುವ ವಿಡಿಯೋಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಅವರ ಜೊತೆ ಮತ್ತೆ ಮತ್ತೆ ಲೈಂಗಿಕ ಸಂಪರ್ಕ ಬಳಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಹೌದು, ಪ್ರಜ್ವಲ್ ರೇವಣ್ಣ ಅವರು ತಮ್ಮ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ಸೆರೆ ಹಿಡಿದು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಇದೀಗ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮೀರಿಸುವಂತಹ ದೊಡ್ಡ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಕಾರ್ಮೆಲ್ ಅಕಾಡೆಮಿಯ ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್ ಕೋಚ್ ಎಬಿವಿ ಮ್ಯಾಥ್ಯೂ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ಲೈಂಗಿಕ ಕ್ರಿಯೆ ನಡೆಸಿ ಎಸ್ಕೇಪ್ ಆಗಿರುವ ಈತ ಮೊಬೈಲ್ನಲ್ಲಿ 2500ಕ್ಕೂ ಅಧಿಕ ಮಹಿಳೆಯರ ನಗ್ನ ವಿಡಿಯೋಗಳಿವೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಎಬಿವಿ ಮ್ಯಾಥ್ಯೂ, ಮೀರಾ ಅವರ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದಾರೆ. ಸಂತ್ರಸ್ಥೆಯ ಮೊಬೈಲ್ನಲ್ಲಿ ಹಲವು ಅಶ್ಲೀಲ ವಿಡಿಯೋಗಳಿದ್ದವು. ಮ್ಯಾಥ್ಯೂ ಮೊಬೈಲ್ನಲ್ಲಿದ್ದ ಅಶ್ಲೀಲ ವಿಡಿಯೋಗಳಲ್ಲಿ ಆತನಿಗೆ ಗೊತ್ತಾಗದಂತೆ ಸಂತ್ರಸ್ಥೆ ತನ್ನ ಮೊಬೈಲ್ಗೆ ಹಾಕಿಸಿಕೊಂಡಿದ್ದರು. ಇದನ್ನು ಸಾಕ್ಷಿಯಾಗಿ ಸಂತ್ರಸ್ಥೆ ಇರಿಸಿಕೊಂಡಿದ್ದರು. ಇದನ್ನೂ ಓದಿ: ರಸ್ತೆ ಗುಂಡಿ ನೋಡಿ ಬಾಯಿ ಬಾಯಿ ಬಡೆದುಕೊಂಡು ಪ್ರತಿಭಟನಾಕಾರರು
ಇನ್ನು ಸಂತ್ರಸ್ತೆಯ ಮೊಬೈಲ್ ನಲ್ಲಿ ತನ್ನ ‘ನಗ್ನ ರಹಸ್ಯ’ ಇರೋದು ಮ್ಯಾಥ್ಯೂ ಗಮನಕಕ್ಕೆ ಬಂದಿತ್ತು. ಕೂಡಲೇ ಸಂತ್ರಸ್ತೆಯ ಮೊಬೈಲ್ ಸಮೇತ ಮ್ಯಾಥ್ಯೂ ಎಸ್ಕೇಪ್ ಆಗಿದ್ದಾನೆ. ಈಗಾಗಲೇ ಕೋಣನಕುಂಟೆ ಠಾಣೆಯಲ್ಲಿ ಎಫ್ಐಆರ್ ಆಗಿದ್ದು ತನಿಖೆ ನಡೆಯುತ್ತಿದೆ. ಆ ಮೊಬೈಲ್ ನಲ್ಲಿರುವ ವಿಡಿಯೋಗಳ ಬಗ್ಗೆ ತನಿಖೆ ಮಾಡುವಂತೆ ಸಂತ್ರಸ್ತೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ಮದುವೆಯಾದ ಮಹಿಳೆಯರೇ ಮ್ಯಾಥ್ಯೂನ ಟಾರ್ಗೆಟ್ ಆಗಿದ್ದರು. ತನ್ನ ಕ್ರಿಕೆಟ್ಕ್ಯಾಂಪ್ಗೆ ಬರೋ ಪೋಷಕರನ್ನೇ ಟಾರ್ಗೆಟ್ ಮಾಡಿ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ. ಹಲವಾರು ಮಹಿಳೆಯ ಜೊತೆ ಕಾಮಕೇಳಿ ಆಡಿರುವ ವಿಡಿಯೋ ಮಾಡಿಕೊಂಡಿದ್ದಾನೆ. ವಿಡಿಯೋ , ಪೋಟೊ ತೆಗೆದುಕೊಂಡು ಅದನ್ನು ತನ್ನ ಮೊಬೈಲ್ನಲ್ಲಿ ಇರಿಸಿಕೊಂಡಿದ್ದ.
ಕ್ರಿಕೆಟ್ ಕೋಚ್ ಮ್ಯಾಥಿವ್ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಸೂಕ್ತ ತನಿಖೆ ಮಾಡುವಂತೆ ಸಂತ್ರಸ್ಥೆ ಮೀರಾ ಆಗ್ರಹಿಸಿದ್ದಾರೆ. ಇದರಿಂದಾಗಿ ನಗ್ನ ರಹಸ್ಯ ತನಿಖೆಯಲ್ಲಿ ಹೊರಬರುತ್ತಾ ಎಂದು ಕಾದು ನೋಡಬೇಕಿದೆ.
Post Views: 8

