ದಸರಾ ಮೆರವಣಿಗೆಯಲ್ಲಿ ಸ್ಟೇಪ್ ಹಾಕಿದ ಶಿವರಾಜ್ ಕುಮಾರ್

Praja vahini
1 Min Read


postviews: 11

ಮೈಸೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿಶ್ವ ವಿಖ್ಯಾತ ಮೈಸೂರು ದಸರಾ ಬಹಳ ಅದ್ದೂರಿಯಾಗಿ ನೆರವೇರಿತು.

ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಜಮಾಹಿಸಿದ್ದು, ಇದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಕೂಡ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ತಮಟೆ ಸೌಂಡ್ಗೆ ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ. ಇದನ್ನೂ ಓದಿ: ಕಣ್ಮನ ಸೆಳೆದ ವಿಶ್ವವಿಖ್ಯಾತ ಜಂಬೂಸವಾರಿ

ಯೆಸ್… ನಿನ್ನೆ (ಗುರುವಾರ ಅ. 02) ನಡೆದ ಮೈಸೂರು ದಸರಾ ಮೆರವಣಿಗೆಯಲ್ಲಿ ನಟ ಶಿವರಾಜ್ ಕುಮಾರ್ ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ದಸರಾ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡಲು ಹೈ ಸರ್ಕಲ್ ಬಳಿಯಿರುವ ಖಾಸಗಿ ಹೋಟೆಲ್ ಮುಂಭಾಗ ಶಿವರಾಜ ಕುಮಾರ್ ಕುಟುಂಬ ಸಮೇತ ಕುಳಿತಿದ್ದರು‌. ಆಗ ಮೆರವಣಿಗೆಯಲ್ಲಿ ಸಾಗಿ ಬಂದ ತಮಟೆಯ ಟೀಂನ ಸದ್ದಿಗೆ ಖುಷಿಯಿಂದಲೇ ತಾವು ಕುಳಿತಿದ್ದ ಜಾಗದಲ್ಲೇ ಎದ್ದು ನಿಂತು ಸ್ಟೆಪ್ ಹಾಕಿದರು.

source

Share This Article