postviews: 6
ಬೆಂಗಳೂರು: ಫ್ಯಾನ್ ಇಂಡಿಯಾ ಸಿನಿಮಾವಾದ ಕಾಂತಾರ ಚಾಪ್ಟರ್ 1 ಸಿನಿಮಾ ಕೇವಲ 24 ಗಂಟೆಗಳಲ್ಲಿ ದಾಖಲೆ ಬರೆದಿದೆ. ಸಪ್ತ ಭಾಷೆಗಳಲ್ಲಿ ಇಡೀ ವಿಶ್ವದಾದ್ಯಂತ ನಿನ್ನೆ (ಗುರುವಾರ ಅಕ್ಟೋಬರ್ 02) ರಂದು ಬಿಡುಗಡೆಗೊಂಡು ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.
ಹೌದು, ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 ಟಿಕೆಟ್ ಬುಕ್ಕಿಂಗ್ ಮಾಡುವ ಬುಕ್‌ಮೈಶೋದಲ್ಲಿದಾಖಲೆ ಬರೆದಿದಿದೆ. 24 ಗಂಟೆಯಲ್ಲಿ 1.28 ಮಿಲಿಯನ್ ಟಿಕೆಟ್ ಮಾರಾಟವಾಗಿದೆ. ಈ ಮೂಲಕ 2025ರಲ್ಲಿ ಬುಕ್‌ಮೈ ಶೋದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಿನಿಮಾ ತಯಾರಿಸಿದ ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ.
ಇದು ಕೇವಲ 1 ದಿನದ ಟಿಕೆಟ್ ಮಾರಾಟದ ಲೆಕ್ಕ ಆಗಿದ್ದು, ಶುಕ್ರವಾರ ಮತ್ತು ಶನಿವಾರದ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗಿದೆ. ಇದನ್ನೂ ಓದಿ: ಇಂದು ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಪ್ತ ಭಾಷೆಗಳಲ್ಲಿ ಬಿಡುಗಡೆ
ಇನ್ನು ದೇಶದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದವು. ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಅ.1ರಂದು ದೇಶದ ವಿವಿಧೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನ ಉತ್ತಮ ಪ್ರದರ್ಶನ ಕಂಡಿದೆ.

