ನನ್ನ ಭಾಷೆ ಕನ್ನಡ, ನಾನು ಹೆಮ್ಮೆಯ ಕನ್ನಡಿಗ: ರಿಷಬ್ ಶೆಟ್ಟಿ

Praja vahini
1 Min Read


postviews: 6

ಬೆಂಗಳೂರು: ಬಹುನಿರೀಕ್ಷಿತ ಫ್ಯಾನ್ ಇಂಡಿಯಾ ಸಿನಿಮಾ ಕಾಂತರಾ ಚಾಪ್ಟರ್ 1 ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಎಲ್ಲಾ ಭಾಷೆಗಳಲ್ಲೂ ಫ್ರೀ ರಿಲೀಸ್ ಇವೆಂಟ್ಷಗಳನ್ನು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಬರದಿಂದ ನಡೆಸುತ್ತಿದ್ದಾರೆ.

ಇನ್ನು (ಭಾನುವಾರ ಸೆಪ್ಟೆಂಬರ್ 28) ಹೈದರಾಬಾದ್ ನಲ್ಲಿ ನಡೆದ ಫ್ರೀ ರಿಲೀಸ್ ಇವೆಂಟ್ ನಲ್ಲಿ ವೇದಿಕೆ ಮೇಲೆ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲವರು ರಿಷಬ್ ಶೆಟ್ಟಿ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ರಿಸೆಪ್ಟ್ ಶೆಟ್ಟಿ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ.

ಇನ್ನು ಈ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ ರಿಷಬ್ ಶೆಟ್ಟಿ ಯವರು, ನನ್ನ ಭಾಷೆ ಕನ್ನಡ, ನಾನು ಹೆಮ್ಮೆಯ ಕನ್ನಡಿಗ, ನಾನು ಕನ್ನಡದಲ್ಲೇ ಯೋಚಿಸುವುದು ಹೀಗಾಗಿ ಕನ್ನಡ ಮಾತಾಡ್ತೀನಿ, ಮಾತನಾಡಲು ಬರದೇ ಇರೋ ಭಾಷೆಯನ್ನ ಮಾತನಾಡಿ ಆ ಭಾಷೆಗೆ ಅಗೌರವ ತೋರಿಸುವುದು ಬೇಡವೆಂದು ಕನ್ನಡದಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಕಾಂತಾರ ಚಾಪ್ಟರ್ 1

ಹೌದು ರಿಷಬ್ ಶೆಟ್ಟಿ ಅವರಿಗೆ ತೆಲುಗು ಮಾತನಾಡಲು ಸರಿಯಾಗಿ ಬರೆದಿದ್ದ ಕಾರಣಕ್ಕೆ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಕೆಲವರು ರಿಷಬ್‌ರನ್ನ ಟ್ರೋಲ್ ಮಾಡಲಾರಂಭಿಸಿದ್ರು. ಬೇರೆಲ್ಲಾ ಸ್ಥಳದಲ್ಲಿ ಆಯಾ ಭಾಷೆಯಲ್ಲಿ ಮಾತನಾಡುವ ರಿಷಬ್ ತೆಲುಗು ನಾಡಿದಲ್ಲಿ ತೆಲುಗು ಭಾಷೆ ಮಾತನಾಡದೇ ಇರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರದ ಕುರಿತು ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.

 

source

Share This Article