ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ, ನಮ್ಮನ್ನು ಬದುಕಲು ಬಿಡಿ: ಮುಕಳೆಪ್ಪ

Praja vahini
1 Min Read

ಹುಬ್ಬಳ್ಳಿ: ಕಳೆದ ನಾಲ್ಕೈದು ದಿನಗಳಿಂದ ಕನ್ನಡದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಹಾಗೂ ಗಾಯಿತ್ರಿ ಇವರಿಬ್ಬರ ಮದುವೆ ಬಗ್ಗೆ ಸಾಕಷ್ಟು ಸುದ್ದಿ ಆಗುತ್ತಿದ್ದು, ಖ್ವಾಜಾ ಶಿರಹಟ್ಟಿ ಗಾಯತ್ರಿಯನ್ನು ಲವ್ ಜಿಹಾದ್ ಮಾಡಿ ಮದುವೆ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ಆರೋಪಿಸಿದ್ದರು.

ಇನ್ನು ಗಾಯತ್ರಿ ಅವರ ತಾಯಿ ಆರೋಪಿಸುತ್ತಿದ್ದಂತೆ ಗಾಯಿತ್ರಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಹಾಕಿ ನಾನು ಸ್ವಯಿಚ್ಛೆಯಿಂದ ಮದುವೆಯಾಗಿದ್ದೇನೆ ಯಾರು ಕೂಡ ನನ್ನನ್ನು ಲವ್ ಜಿಹಾದ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಇದೀಗ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಹಾಗೂ ಗಾಯತ್ರಿ ಸೇರಿಕೊಂಡು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ನಮ್ಮ ಬಗ್ಗೆ ಯಾರೇ ಸುಳ್ಳು ಸುದ್ದಿ ಹಬ್ಬಿಸಿದರು ಅದನ್ನು ನಂಬಬೇಡಿ ನಾವು ಸ್ವಯಚೆಯಿಂದ ಮದುವೆ ಮಾಡಿಕೊಂಡಿದ್ದೇವೆ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಮುಕಳೆಪ್ಪ ಸ್ಪಷ್ಟನೆ ನೀಡಿದ್ದು. ‘ನಾನು ಯಾವುದೇ ಲವ್ ಜಿಹಾದ್ ಮಾಡಿಲ್ಲ. ನನ್ನ ಧರ್ಮವನ್ನು ನಾನು ಪಾಲಿಸುತ್ತೇನೆ. ನನ್ನ ಪತ್ನಿ ಆಕೆಯ ಧರ್ಮವನ್ನು ಕೊನೆಯವರೆಗೂ ಪಾಲಿಸಿಕೊಂಡು ಹೋಗುತ್ತಾಳೆ, ಅವಳನ್ನು ನಾನು ಮತಾಂತರ ಮಾಡಿಲ್ಲ, ನಾನು ಈ ಕರ್ನಾಟಕದಲ್ಲಿ ಹುಟ್ಟಿದ್ದು ನಾನು ಕೂಡ ಹಿಂದು ಎಂದು ಖುಷಿಯಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: 4 ವರ್ಷ ನೀವು ಏನ್ ಕಡೆದು ಕಟ್ಟೆ ಹಾಕಿದ್ರಿ? ಬಿಜೆಪಿಗೆ ಪ್ರದೀಪ್​ ಈಶ್ವರ್​  ಪ್ರಶ್ನೆ

ಇನ್ನು ಮುಕಳೆಪ್ಪ ಪತ್ನಿ ಗಾಯತ್ರಿ ಕೂಡ ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಂಬಬೇಡಿ, ನನಗೆ ಯಾರೂ ಮತಾಂತರ ಮಾಡಿ ಬಲವಂತವಾಗಿ ಮದುವೆ ಮಾಡಿಸಿಲ್ಲ, ನಾವು ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ ಎಂದು ವಿಡಿಯೊ ಮೂಲಕ ಹೇಳಿದ್ದಾರೆ.


Post Views: 2

source

Share This Article