ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!

Praja vahini
1 Min Read

ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್ ನೀಡಿದೆ. ಬಿಪಿಎಲ್ ಕಾರ್ಡ್ಗಳನ್ನು ಕೇವಲ ಬಡವರು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಪಡೆಯಲು ಹಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ಇದ್ದರೂ ಕೂಡ ಅಂತವರು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಹಾಗಾಗಿ ಅವರ ಪಡಿತರ ಚೀಟಿಯನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ನ್ಯಾಯಬೆಲೆ ಅಂಗಡಿಯ ಮುಂದೆ ರದ್ದಾಗಿರುವ ಪಡಿತರ ಚೀಟಿದಾದಾರ ಹೆಸರುಗಳನ್ನು ನೋಟಿಸ್ ಬೋರ್ಡ್ ಗಳಲ್ಲಿ ಅಂಟಿಸಲಾಗಿದೆ. ಇದನ್ನೂ ಓದಿ: ಕೆಮ್ಮಿನ ಔಷಧಿ ಸೇವಿಸಿ ಮಕ್ಕಳು ಸಾವು; ಆರೋಗ್ಯ ಸಚಿವರು ಹೇಳಿದ್ದೇನು?

ಹೌದು, ನೆಲಮಂಗಲ ತಾಲೂಕಿನಲ್ಲಿ ಸುಮಾರು 4000ಕ್ಕೂ ಹೆಚ್ಚು ಜನರಿಗೆ ಪಡಿತರ ಕಾರ್ಡ್ ಡಿಲೀಟ್‌ ಮಾಡಲು ಮುಂದಾಗಿದೆ. ಡಿಲೀಟ್‌ ಮಾಡಿದ್ದು ಮಾತ್ರವಲ್ಲದೇ ನ್ಯಾಯಬೆಲೆ ಅಂಗಡಿಯಲ್ಲಿ ಡಿಲೀಟ್‌ ಮಾಡಲಾದ ವ್ಯಕ್ತಿಗಳ ಹೆಸರಿನಲ್ಲಿರುವ ಕಾರ್ಡ್‌ ವಿವರಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸಲಾಗಿದೆ.

ನೋಟಿಸ್ ನಲ್ಲಿ ಏನಿದೆ?

ನೋಟಿಸ್‌ ಬೋರ್ಡ್‌ನಲ್ಲಿ ಕೃಷಿ ಇತ್ಯಾದಿ ಆದಾಯಗಳಿಂದಾಗಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದೆ. ಹೀಗಾಗಿ ನಿಮ್ಮ ಪಡಿತರವನ್ನು ರದ್ದುಗೊಳಿಸಲು ಮುಂದಾಗಿದ್ದೇವೆ. ಈ ಬಾರಿ ಕೊನೆಯ ಬಾರಿಗೆ ಪಡಿತರ ನೀಡಲಾಗುತ್ತದೆ. ಮುಂದಿನ ತಿಂಗಳಿನಿಂದ ಪಡಿತರ ನೀಡಲಾಗುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

 

source

Share This Article