ಮಾರ್ಕ್ ಸಿನಿಮಾ; ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ಕಿಚ್ಚ

Praja vahini
1 Min Read

ಬೆಂಗಳೂರು: ಕನ್ನಡ ಚಿತ್ರರಂಗಗಳಲ್ಲಿ ಇತ್ತೀಚಿಗೆ ಮೂಡಿ ಬರುತ್ತಿರುವ ಸಿನಿಮಾಗಳೆಲ್ಲ ಇಡೀ ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾದ ಮೊದಲನೆಯ ಸಾಂಗ್ ರಿಲೀಸ್ ಆಗಿದ್ದು ಕಿಚ್ಚನ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ.

ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮಾರ್ಕ್ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಅನೂಪ್ ಭಂಡಾರಿ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಕಂಠ ಕುಣಿಸಿದ್ದಾರೆ. `ಮಾರ್ಕ್’ ಸಿನಿಮಾದ ಸೈಕೋ ಸೈತಾನ್ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಣೆ ಮಾಡಿದ ಮುರ್ಮು

ಸಾಂಗ್ ರಿಲೀಸ್ ಆದ ಬೆನ್ನಲ್ಲೇ ಮಾರ್ಕ್ ಸಿನಿಮಾ ತಂಡ ಸಿನಿಮಾ ಪ್ರೇಮಿಗಳಿಗೆ ಹುಕ್‌ಸ್ಟೆಪ್ ಡ್ಯಾನ್ಸ್ ಚಾಲೆಂಜ್ ನೀಡಿದೆ. ಈ ಸಾಂಗ್ ಪ್ಲೇ ಮಾಡಿಕೊಂಡು, ಹುಕ್ ಸ್ಟೆಪ್ ಹಾಕಬೇಕು. ಕಿಚ್ಚ ಸುದೀಪ್ ಅವರು ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹ್ಯಾಷ್‌ಟ್ಯಾಗ್ ಜೊತೆ ಪೋಸ್ಟ್ ಮಾಡಬೇಕು. ಅತ್ಯುತ್ತಮ ರೀಲ್ಸ್‌ ಚಿತ್ರತಂಡದ ಆಫಿಷಿಯಲ್ ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಿ ಅವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.

source

Share This Article