ರಕ್ಷಣಾ ವೇದಿಕೆ ಸಮಾಜ ಸೇವೆಗೆ ವೇದಿಕೆಯಾಗಲಿ: ಸತೀಶ್ ರೆಡ್ಡಿ

Praja vahini
1 Min Read

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು ಇಂದು (ಭಾನುವಾರ ಅಕ್ಟೋಬರ್ 5) ರಂದು ಶ್ರೀ ಭುವನೇಶ್ವರಿ ಅಗರ ನಗರ ಹಿತ ರಕ್ಷಣಾ ವೇದಿಕೆಯ ನೂತನ ಸಭಾಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ಈ ನೂತನ ಸಭಾಭವನವು ಸಮಾಜ ಸೇವೆ, ಏಕತೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ವದ ವೇದಿಕೆಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ಸಂಘಟಕರ ಪರಿಶ್ರಮ ಮತ್ತು ಎಲ್ಲರ ಸಹಭಾಗಿತ್ವಕ್ಕೆ ಅಭಿನಂದನೆ ತಿಳಿಸಿದರು.

ಸಮಾಜದ ಹಿತಕ್ಕಾಗಿ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರಿಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ‌ಮುಖಂಡರಾದ ನರಸಿಂಹಮೂರ್ತಿ ರವರು, ಲಕ್ಷ್ಮಣ್ ರೆಡ್ಡಿ ರವರು,ಹಾಗೂ ಮತ್ತಿತರರು ಉಪಸ್ಥಿತರಿದ್ದರು.

source

Share This Article