ಬೆಂಗಳೂರು: ದಸರಾ ಹಬ್ಬ ಎಂದರೆ ಕೇವಲ ಮೈಸೂರಿನಲ್ಲಿ ಮಾತ್ರ ದಸರಾ ಹಬ್ಬ ಆಚರಣೆ ಮಾಡದೆ ಇಡೀ ರಾಜ್ಯದಾದ್ಯಂತ ಎಲ್ಲೆಡೆ ಬಹಳ ಸಡಗರ ಸಂಭ್ರಮದಿಂದ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಹೌದು, ದಸರಾ ಹಬ್ಬ ಬಂತಂದರೆ ಸಾಕು ಇಡೀ ರಾಜ್ಯವೇ ವಿವಿಧ ಬಗೆಯ ಅಲಂಕಾರಗಳ ಮೂಲಕ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಕೂಡ ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬವನ್ನು ನೋಡಲು ದೇಶ ಮಾತ್ರವಲ್ಲದೇ ವಿದೇಶದಿಂದಲೂ ಕೂಡ ಪ್ರವಾಸಿಗರು ಬಂದು ದಸರಾ ಹಬ್ಬವನ್ನು ಕಣ್ಣು ತುಂಬಿಕೊಳ್ಳುತ್ತಾರೆ.
ಇನ್ನು ಬೆಂಗಳೂರಿನಲ್ಲೂ ಕೂಡ ದಸರಾ ಹಬ್ಬದ ಮೆರುಗು ಗೆಲ್ಲಡೆ ಮನೆ ಮಾಡಿದೆ. ದಸರಾ ಹಬ್ಬ ಬಂತಂದರೆ ಸಾಕು ವಿವಿಧ ಬಗೆಯ ಗೊಂಬೆಗಳನ್ನು ಕೂರಿಸಿ ಅಲಂಕರಿಸಿ ಹಬ್ಬ ಆಚರಣೆ ಮಾಡುವುದು ರೂಡಿಯಲ್ಲಿದೆ. ಅದರಂತೆ ಬೆಂಗಳೂರು ನಗರದಲ್ಲಿ ದಸರಾ ಬೊಂಬೆಗಳ ಸೊಬಗು ಸಿಟಿಮಂದಿಯ ಮನಸೂರೆಗೊಳಿಸ್ತಿದೆ. ಪಟ್ಟದ ರಾಣಿ, ಮದುವೆ ದಿಬ್ಬಣದ ಜೊತೆಗೆ ಗತಕಾಲದ ವೈಭವಗಳನ್ನು ಸಾರುವ ಬೊಂಬೆಗಳು ಬೆಂಗಳೂರಿಗರನ್ನು ತನ್ನತ್ತ ಸೆಳೆಯುತ್ತಿವೆ. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಶುರುವಾಯಿತು ಬಂಧನದ ಭೀತಿ!
ಸೂಕ್ಷ್ಮ ಕೆತ್ತನೆ ಜೊತೆಗೆ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ನಸುನಗುತ್ತ ಆಕರ್ಷಣೆ ಮಾಡುತ್ತಿರುವ ಬೊಂಬೆಗಳ ಲೋಕ, ಇತ್ತ ಪಟ್ಟದ ರಾಣಿ, ಮದುವೆ ದಿಬ್ಬಣದ ಜೊತೆಗೆ ಗತಕಾಲದ ವೈಭವಗಳನ್ನ ಕಣ್ಣಿಗೆ ಕಟ್ಟಿಕೊಡುತ್ತಿವೆ.
ಮಲ್ಲೇಶ್ವರ ಸುತ್ತಮುತ್ತ ದಸರಾ ಬೊಂಬೆಗಳ ಪ್ರದರ್ಶನ ಹಾಗೂ ಮಾರಾಟ ಭರ್ಜರಿಯಾಗಿ ನಡೀತಿದ್ದು, ರಾಜ್ಯ ಮಾತ್ರವಲ್ಲದೇ ಹೊರರಾಜ್ಯಗಳ ಕಲಾವಿದರ ಕೈನಲ್ಲಿ ಅರಳಿದ ದಸರಾ ಬೊಂಬೆಗಳಿಗೆ ಸಖತ್ ಡಿಮ್ಯಾಂಡ್ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣಗಳಿಂದ ತುಂಬಿರುವ ಗೊಂಬೆಗಳು ಎಲ್ಲರ ಮನ ಸೆಳೆಯುತ್ತಿವೆ. ವಿವಿಧ ಬಗೆಯ ಗೊಂಬೆಗಳನ್ನು ನೋಡಿ ಗ್ರಾಹಕರು ಖುಷಿಯಿಂದ ಖರೀದಿಗೆ ಮುಂದಾಗಿದ್ದಾರೆ.
Post Views: 36

