ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಜಾತಿಗಣತಿ ಪ್ರಾರಂಭ

Praja vahini
1 Min Read


postviews: 2

ಬೆಂಗಳೂರು: ಇಡೀ ರಾಜ್ಯದಲ್ಲಿ ಈಗಾಗಲೇ ಜಾತಿಗಣತಿ ಪ್ರಾರಂಭವಾಗಿದ್ದು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನಿಂದ (ಶನಿವಾರ ಅ. 04) ಜಾತಿಗಣತಿ ಪ್ರಾರಂಭವಾಗಲಿದೆ. ಸುಮಾರು 32 ಲಕ್ಷ ಮನೆಗಳ ಸಮೀಕ್ಷೆ ಆಗಲಿದೆ.

ಇನ್ನು ಬೆಂಗಳೂರಿನಲ್ಲಿ ಜಾತಿಗಣತಿ 2 ವಾರಗಳ ಒಳಗೆ ಸಮೀಕ್ಷೆ ಮುಕ್ತಾಯ ಮಾಡುವ ಟಾರ್ಗೆಟ್‌ ಅನ್ನು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಲ್ಲಿ ಇಂದಿನಿಂದ ಸಮೀಕ್ಷೆ ಆರಂಭ ಆಗುತ್ತಿದೆ. ಇದನ್ನೂ ಓದಿ: ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಮಾಜಿ ಸಂಸದ!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅ. 7ಕ್ಕೆ ಸಮೀಕ್ಷೆ ಮುಕ್ತಾಯ ಆಗಲಿದೆ. ಆದರೆ ಬೆಂಗಳೂರಿನಲ್ಲಿ ವಿಸ್ತರಣೆ ಆಗಲಿದೆ. ಸಮೀಕ್ಷೆಗೆ 17 ಸಾವಿರ ಸಿಬ್ಬಂದಿಯನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 100ರಿಂದ 150 ಮನೆ ಒಬ್ಬೊಬ್ಬರಿಗೆ ನೀಡಲಿದ್ದಾರೆ. ಸಮೀಕ್ಷೆ ಸಿಬ್ಬಂದಿ ಕಡಿಮೆ ಇರುವ ಸಮೀಕ್ಷೆ ಮುಕ್ತಾಯಕ್ಕೆ ಮೂರರಿಂದ 4 ತಿಂಗಳಾದರೂ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಿದೆ.

 

source

Share This Article