ಶಹಾಪುರ: ತಾಲೂಕಿನ ಹತ್ತಿಗುಡೂರ ಗ್ರಾಮದ ಬಳಿ ಬೇರು ಸಮೇತ ದೊಡ್ಡ ಮರವೊಂದು ನೆಲಕ್ಕುರುಳಿದ್ದು ಟಿ. ವಡಗೇರ ದಿಂದ ನಗರಕ್ಕೆ ಹೊರಟಿದ್ದ ಬಸವರೆಡ್ಡಿ, ಸುಜಾತ ದಂಪತಿಗಳಿಬ್ಬರು ಕೂದಲೇಳೆಯ ಅಪಾಯದಿಂದ ಬದುಕುಳಿದಿದ್ದಾರೆ.
ಈಗಾಗಲೇ ಭಾರಿ ಮಳೆಗೆ ಬೆಳೆಗಳು ನಾಶವಾಗಿದ್ದು, ಇರುವ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ದಂಪತಿಗಳಿಬ್ಬರು ರಸಗೊಬ್ಬರ ಖರೀದಿಗೆಂದು ನಗರಕ್ಕೆ ಬರುವಾಗ ಹತ್ತಿಗುಡೂರ ಬಳಿ ಹೆದ್ದಾರಿಯ ರಸ್ತೆಯ ಮೇಲೆ ಮರ ಉರುಳಿದೆ, ದಂಪತಿಗಳಿಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಮೊದಲೇ ಬೆಳೆ ನಾಶವಾಗಿದ್ದು ಸಾಲದ ಸುಳಿಯಲ್ಲಿರುವ ಕುಟುಂಬಕ್ಕೆ ಆಸ್ಪತ್ರೆಯ ವೆಚ್ಚ ಭರಿಸುವ ಶಕ್ತಿ ಇಲ್ಲದೇ ಇದ್ದು, ಪರಿಹಾರ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಮನವಿಯಾಗಿದೆ.
Post Views: 11

