2026ರಲ್ಲಿ ಮದುವೆಯಾಗಲಿರುವ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ!?

Praja vahini
1 Min Read

ಬೆಂಗಳೂರು: ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿ ಹಲವಾರು ವರ್ಷಗಳೇ ಕಳಿಸುತ್ತಾ ಬಂದಿದ್ದು ಇದೀಗ ಈ ಜೋಡಿಗಳು ಹಸಿಮಣೆ ಏರಲು ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ.

ಹೌದು, ನಟಿ ರಶ್ಮಿಕ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿದ್ದು ಇವರಿಬ್ಬರು ಎಲ್ಲಿಯೇ ಓಡಾಡಿದರು ಜೊತೆಯಲ್ಲಿ ಓಡಾಡುತ್ತಾರೆ. ಅಲ್ಲದೆ ಇದೀಗ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರಶ್ಮಿಕಾ ಹಾಗೂ ವಿಜಯ್ 2026 ಫೆಬ್ರುವರಿಯಲ್ಲಿ ಹಸೆ ಮಣೆ ಏರಲಿದ್ದಾರೆ ಎಂದು ವರದಿಯಾಗಿದೆ. ಟಾಲಿವುಡ್‌ನ ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ರಹಸ್ಯವಾಗಿ ಹೈದರಾಬಾದ್‌ನ ದೇವರಕೊಂಡ ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.‌ ಇದನ್ನೂ ಓದಿ: ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಮಾಜಿ ಸಂಸದ!

ಇನ್ನು ನಿಶ್ಚಿತಾರ್ಥವು ಇಬ್ಬರೂ ತಾರೆಯರ ಆಪ್ತ ಸ್ನೇಹಿತರು ಮತ್ತು 2 ಕುಟುಂಬಗಳ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿ ನಡೆದಿದೆ. ವಿಜಯ್‌ ಮತ್ತು ರಶ್ಮಿಕಾ ಶೀಘ್ರವೇ ಈ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ ಎಂದು ವರದಿಯಾಗಿದೆ.

 

source

Share This Article