ಸರಳೀಕೃತ ಜಿ.ಎಸ್.ಟಿ. ಪದ್ಧತಿ- ಕೇಂದ್ರ ಸರ್ಕಾರಕ್ಕೆ ಬಿವೈವಿ ಅಭಿನಂದನೆ

Praja vahini
1 Min Read

ಶಿವಮೊಗ್ಗ:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎನ್.ಡಿ.ಎ. ಸರ್ಕಾರ ಸರಳೀಕೃತ ಜಿ.ಎಸ್.ಟಿ. 2.0 ರ ವ್ಯವಸ್ಥೆ ಜಾರಿ ಮಾಡಿರುವುದನ್ನು ಸ್ವಾಗತಿಸಿ ಇಂದು (ಸೋಮಾವಾರ ಸೆ. 22) ಶಿವಮೊಗ್ಗದ ಅಂಗಡಿ- ಮಳಿಗೆಗಳಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ. ವಿಜಯೇಂದ್ರ ಅವರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,  2 ಸ್ಲ್ಯಾಬ್ ಜಿಎಸ್‍ಟಿ ಜಾರಿಗೊಳಿಸಿದ್ದಾರೆ. ಈ ಮೂಲಕ ಜನರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ಅದಕ್ಕಾಗಿ ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಜನತೆಯ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸಲು ಈ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯಕರ ಪರಿಸರ ಒದಗಿಸುವುದು ನಮ್ಮ ಬದ್ಧತೆ: ಸತೀಶ್ ರೆಡ್ಡಿ
ಜಗತ್ತಿನ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ಬೇರೆ ಬೇರೆ ದೇಶಗಳಿಗೆ ತೆರಿಗೆಯನ್ನು ಹೆಚ್ಚಿಸಿರುವುದನ್ನು ನಾವು ನೋಡಿದ್ದೇವೆ. ಇಂದು ಭಾರತಕ್ಕೆ ದೊಡ್ಡ ಸವಾಲನ್ನು ಹಾಕಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ಭಾರತ ಯಾವುದಕ್ಕೂ ಜಗ್ಗುವುದಿಲ್ಲ ಮತ್ತು ಬಗ್ಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಅಧಿಕಾರ ಗಳಿಸಿಕೊಳ್ಳುವ ಸಲುವಾಗಿ ಗರೀಬಿ ಹಟಾವೋ ಎಂಬ ಘೋಷಣೆಯೊಂದಿಗೆ ಅನೇಕ ಚುನಾವಣೆಯನ್ನು ಗೆದ್ದುಕೊಂಡು ಬಂದಿತ್ತು. ಆದರೆ ಚುನಾವಣೆ ಗೆದ್ದರೇ ಹೊರತು ಈ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು. ಇಂದು ಭಾರತ ಸ್ವಾವಲಂಬಿ ಭಾರತ ಆಗಬೇಕು; ಭಾರತ ಸಮೃದ್ಧಿ ರಾಷ್ಟ್ರವಾಗಿ ಪರಿವರ್ತನೆ ಆಗಬೇಕು; ಅದಕ್ಕಾಗಿ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿದರು.


Post Views: 7

source

Share This Article