ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ದಸರಾ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಕರ್ನಾಟಕ ಸರ್ಕಾರವು ಕಡ್ಡಾಯ ಜೀವ ವಿಮಾ ಯೋಜನೆಯಡಿಯಲ್ಲಿ 2020-2022ರ ಅವಧಿಗೆ ಸಂಬಂಧಿಸಿದಂತೆ ಬೋನಸ್ ಘೋಷಣೆ ಮಾಡಿದೆ.
ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಪ್ರಕಾರ, 01.04.2020 ರಿಂದ 31.03.2022ರವರೆಗಿನ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಪಾಲಿಸಿಗಳಿಗೆ ಪ್ರತಿ ರೂ.1000 ವಿಮಾ ಮೊತ್ತಕ್ಕೆ ವಾರ್ಷಿಕ ರೂ.80 ಲಾಭಾಂಶ ನೀಡಲಾಗುತ್ತದೆ. ಜೊತೆಗೆ, 2022-2024ರ ಅವಧಿಯಲ್ಲಿ ಅವಧಿಪೂರ್ಣ, ಮರಣಜನ್ಯ ಅಥವಾ ವಿಮಾ ತ್ಯಾಗದ ಮೂಲಕ ಹೊರಹೋಗಿರುವ ಪಾಲಿಸಿಗಳಿಗೆ ಸಹ ಇದೇ ಪ್ರಮಾಣದ ಮಧ್ಯಂತರ ಲಾಭಾಂಶ ದೊರೆಯಲಿದೆ. ಇದನ್ನೂ ಓದಿ: ರಸ್ತೆ ಗುಂಡಿ ನೋಡಿ ಬಾಯಿ ಬಾಯಿ ಬಡೆದುಕೊಂಡು ಪ್ರತಿಭಟನಾಕಾರರು
2020-2022ರ ವಿಮಾ ಮೌಲ್ಯಮಾಪನ ವರದಿಯ ಪ್ರಕಾರ, ಒಟ್ಟು ನಿವ್ವಳ ಹೊಣೆಗಾರಿಕೆ ರೂ.5,624.46 ಕೋಟಿಯಾಗಿದ್ದು, ರೂ.2,524.53 ಕೋಟಿಯಷ್ಟು ಹೆಚ್ಚುವರಿ (Surplus) ದಾಖಲಾಗಿದೆ. ಇದರಲ್ಲಿ ರೂ.1,955.95 ಕೋಟಿಯನ್ನು ಲಾಭಾಂಶವಾಗಿ ವಿತರಿಸಲು ನಿರ್ಧರಿಸಲಾಗಿದೆ. ಉಳಿದ ರೂ.568.57 ಕೋಟಿಯನ್ನು ಮುಂದಿನ ಮೌಲ್ಯಮಾಪನ ಅವಧಿಗೆ ಕೊಂಡೊಯ್ಯಲಾಗಿದೆ.
1958ರ ನಿಯಮ-22ರ ಪ್ರಕಾರ ದೈವಾರ್ಷಿಕ ವಿಮಾ ಮೌಲ್ಯಮಾಪನ ನಡೆಸಬೇಕೆಂಬ ನಿಯಮವನ್ನು ಅನುಸರಿಸಿ ಗಣಕಕಾರರಿಂದ ನೀಡಲಾದ ಶಿಫಾರಸ್ಸುಗಳಿಗೆ ಸರ್ಕಾರ ಅನುಮೋದನೆ ನೀಡಿದೆ.
Post Views: 18

