ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಾಂತಾರ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿ ಹೆಚ್ಚು ಮನ್ನಣೆ ಪಡೆದಿರುವ ಕಾಂತರಾತ್ ಸಿನಿಮಾ ಮತ್ತೆ ಇದೀಗ ಕಾಂತಾರ ಚಾಪ್ಟರ್ 1 ರಿಲೀಸ್ ಗೆ ಸಜ್ಜಾಗಿದೆ.
ಈಗಾಗಲೇ ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ ನಟ ರಿಶಬ್ ಶೆಟ್ಟಿಯವರು ಟ್ರೈಲರ್ ರಿಲೀಸ್ ಬಲಿಕ ಪ್ರೆಸ್ ಮೀಟ್ ಮಾಡಿ ಸಿನಿಮಾ ಚಿತ್ರೀಕರಣದಲ್ಲಿ ನಡೆದ ಘಟನೆಗಳ ಬಗ್ಗೆ ಒಂದೊಂದಾಗಿ ಹಂಚಿಕೊಂಡಿದ್ದಾರೆ.
ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಅವರು, ನಾನು ಕಾಂತರಾಜ್ ಚಾಪ್ಟರ್ 1 ಸಿನಿಮಾ ಶೂಟಿಂಗ್ ಮಾಡಬೇಕಾದರೆ 4 ಸಲ ಸತ್ತು ಹೋಗ್ತಿದ್ದೆ ದೈವದಿಂದ ಬದುಕಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ.
ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅದೆಷ್ಟೋ ವಿಜ್ಞಗಳು ಬಂದರೂ ಕೂಡ ಅದನ್ನೆಲ್ಲ ದಾಟಿ ಇದೀಗ ಬಿಡುಗಡೆಗೆ ಕಾಂತಾರಾ ಚಾಪ್ಟರ್ 1 ಸಜ್ಜಾಗಿದೆ ಎಂದರು. ದೈವರ ಲೀಲೆಯೆನೋ ನಾನು ನಿಮ್ಮೆಲ್ಲರ ಮುಂದೆ ಮತ್ತೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಕಾಂತಾರ ಚಾಪ್ಟರ್ 1
ಅಲ್ಲದೆ ಈ ಸಿನಿಮಾ ಕಂಪ್ಲೀಟ್ ಮಾಡೋಕೆ ಆಗ್ತಿರಲಿಲ್ಲ, ಅಷ್ಟು ಅಡೆತಡೆಗಳು ಎದುರಿಸಿದ್ದೀನಿ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ.. ನಾನು ಶೂಟಿಂಗ್ ಹೋಗ್ತಿದ್ರೆ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಇನ್ನೊಂದು ಸಲ ಹೇಗಿದ್ದೀರ ಅಂತ ಕೇಳಿದ್ರೆ ಅತ್ತೆ ಬಿಡ್ತೀನಿ, ಅಷ್ಟೊಂದು ಎಮೋಷನಲ್ ಜರ್ನಿ ಇದು ಅಂತ ಹೇಳಿಕೊಂಡ್ರು.
ಫಾರೆಸ್ಟ್ ಮಿನಿಸ್ಟರ್ ಇಂದ ಎಲ್ರು ನನಗೆ ಈ ಚಿತ್ರಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಸರಿಯಾಗಿ ಮಲಗಿ 3 ತಿಂಗಳಾಯ್ತು. ಕೇವಲ 2 ಗಂಟೆ ಅಷ್ಟೇ ಮಲಗ್ತಿದ್ದೆ. ಲೆಕ್ಕ ಹಾಕಿದ್ರೆ 4 ಸಲ ನಾನು ಸತ್ತೇ ಹೋಗ್ತಿದ್ದೆ, ದೈವ ನನನ್ನು ಬದುಕಿಸಿದೆ ಅಂತ ಭಾವುಕರಾದ್ರು.
Post Views: 11

