ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ರಸ್ತೆಗಳೆಲ್ಲ ಗುಂಡಿ ಬಿದ್ದಿದ್ದರೂ ಕೂಡ ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬಿಜೆಪಿ ಯು ಪ್ರತಿಭಟನೆಯನ್ನು ಕೈಗೊಂಡಿದೆ.
ಬಿಜೆಪಿಯು ಪ್ರತಿಭಟನೆಯನ್ನು ಕೈಗೊಂಡಿರುವ ಕುರಿತಾಗಿ ಇದೀಗ ಚಿಕ್ಕಬಳ್ಳಾಪುರದ ಕಾಂಗ್ರೆಸ್ನ ಶಾಸಕ ಪ್ರದೀಪ್ ಈಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ರಸ್ತೆಗಳನ್ನು ಸರಿಯಾಗಿ ನಿರ್ಮಾಣ ಮಾಡಿದ್ದಾರೆ ಈ ಪರಿಸ್ಥಿತಿ ಯಾವುದೇ ರಸ್ತೆಗೂ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾಲ್ಕು ವರ್ಷ ಬಿಜೆಪಿಯವರ ಆಡಳಿತ ಮಾಡಿದ್ರು ಅಲ್ವಾ? ನಾಲ್ಕು ವರ್ಷ ನೀವು ಏನು ಕಡೆದು ಕಟ್ಟೆ ಹಾಕಿದ್ದೀರ ಎಂದು ಬಿಜೆಪಿಗರಿಗೆ ಪ್ರಶ್ನಿಸಿದ್ದಾರೆ. ಅವೈಜ್ಞಾನಿಕ ರಸ್ತೆಗಳ ನಿರ್ಮಾಣ ಆಗಿರೋದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಹೀಗಾಗಿಯೇ ರಸ್ತೆಗಳು ಗುಂಡಿ ಬಿದ್ದಿವೆ. ಇದನ್ನೂ ಓದಿ: ಸರ್ಕಾರದ ಖಜಾನೆ ಖಾಲಿ ಖಾಲಿ: ಛಲವಾದಿ ನಾರಾಯಣಸ್ವಾಮಿ
ವಿಜಯೇಂದ್ರಣ್ಣ ನಿಮ್ಮ ತಂದೆಯವರೂ ಸಿಎಂ ಆಗಿದ್ದರು ಅಲ್ವಾ? ಆಗ ಗುಂಡಿಗಳ ಮೇಲೆ ನಿಮಗೆ ಪ್ರೀತಿ ಇರಲಿಲ್ವಾ ಎಂದು ಪ್ರದೀಪ್ ಪ್ರಶ್ನಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ಗೂ ತಿರುಗೇಟು ನೀಡಿರುವ ಶಾಸಕ ಪ್ರದೀಪ್ ಈಶ್ವರ್, ನೀವು ಎಲ್ಲ ಖಾತೆಗಳನ್ನ ನಿರ್ವಹಿಸಿದ್ದೀರಿ ಅಶೋಕ್ ಅಣ್ಣ. ದೆಹಲಿಯ ಹಲವೆಡೆ ಸಾಕಷ್ಟು ರಸ್ತೆಗುಂಡಿಗಳು ಬಿದ್ದಿವೆ. ದೆಹಲಿ ಸಿಎಂ ಮನೆಯ ಅಕ್ಕ ಪಕ್ಕದ ರಸ್ತೆಗಳಲ್ಲಿಯೇ ಗುಂಡಿಗಳಿವೆ. ಅಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ನಿಮ್ಮದೆ. ಹೀಗಿರುವಾಗ ನಮ್ಮ ಬಗ್ಗೆ ಏನು ಮಾತಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
Post Views: 1

