ಪ್ರಕೃತಿ ಸೌಂದರ್ಯದ ಮಧ್ಯೆ ಪತಿ ಜೊತೆ ಅನುಶ್ರೀ ಜಾಲಿ ಜಾಲಿ

Praja vahini
1 Min Read


postviews: 1

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಕಳೆದ ತಿಂಗಳು (ಆಗಸ್ಟ್ 28) ರಂದು ಅದ್ದೂರಿಯಾಗಿ ರೋಷನ್ ಎಂಬುವವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಮದುವೆಯಾದ ನಂತರ ಎಲ್ಲರೂ ಸಾಮಾನ್ಯವಾಗಿ ಬೇರೆ ರಾಜ್ಯ ಅಥವಾ ವಿದೇಶಗಳಿಗೆ ತೆರಳಿ ತಮ್ಮ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಆದರೆ ನಿರೂಪಕಿ ಅನುಶ್ರೀ ಅವರು ತಮ್ಮ ಪತಿ ರೋಷನ್ ಅವರ ಜೊತೆ ನೈಸರ್ಗಿಕ ಹಸಿರಿನ ಮಧ್ಯ ಕಾಲ ಕಳೆಯುತ್ತಿದ್ದಾರೆ.

ಮಳೆಯಲ್ಲಿ ಪತಿಯ ಜೊತೆ ಓಡಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಅವರು, ಹಸಿರು ಗದ್ದೆ ಸುರಿಯುತ್ತಿರುವ ಮಳೆಯಲ್ಲಿ ಓಡಾಡುತ್ತಿರುವ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೌದು,  ಅನುಶ್ರೀ ತಮ್ಮ ಪತಿ ರೋಶನ್ ಜೊತೆ ಹಿಲ್ ಲೊಕೇಶನ್‌ಗಳಲ್ಲಿ ಸುತ್ತಾಟ ಮಾಡುತ್ತಿರುವ ಜೋಡಿ, ಬೆಟ್ಟಗಳ ಮೆಟ್ಟಿಲುಗಳನ್ನು ಏರಿ, ಹೊಲ-ಗದ್ದೆಗಳಲ್ಲಿ ಓಡಾಡುತ್ತಾ ಪ್ರಕೃತಿಯನ್ನುಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ನನ್ನ ಭಾಷೆ ಕನ್ನಡ, ನಾನು ಹೆಮ್ಮೆಯ ಕನ್ನಡಿಗ: ರಿಷಬ್ ಶೆಟ್ಟಿ

ಈ ನವ ಜೋಡಿ ಹನಿಮೂನ್ ಮುದ್ದಿನ ಸಂಭ್ರಮವನ್ನು ಬಿಟ್ಟು, ನೈಸರ್ಗಿಕ ಸೌಂದರ್ಯದಲ್ಲಿ ಹೊಸ ಉತ್ಸಾಹದ ಜೀವನವನ್ನು ಅನುಭವಿಸುತ್ತಿರುವುದು ಪ್ರೇಕ್ಷಕರಿಗೆ ಮನರಂಜನೆಯ ಸಂಗತಿಯಾಗಿ ಕಂಡುಬರುತ್ತಿದೆ.

 

source

Share This Article