ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅವರ ಪರ ವಕೀಲರು ಕೋಟಿಗೆ ಅರ್ಜಿ ಸಲ್ಲಿಸಿದರು.
ಅರ್ಜಿ ವಿಚಾರಣೆ ವೇಳೆ ದರ್ಶನ್ ಪರ ವಕೀಲರು ವಾದ ಮಂಡಿಸಿ, ರೆಪಿಸ್ಟ್ ಉಮೇಶ್ ರೆಡ್ಡಿ ಅವರಿಗೆ ವಿಐಪಿ ಸೌಲಭ್ಯಗಳನ್ನು ಕೊಡಲಾಗುತ್ತಿದೆ ಆದರೆ ನಟ ದರ್ಶನ್ ಅವರಿಗೆ ಯಾಕ ಏನು ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ದರ್ಶನ್‌ಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ಹಾಗೂ ಕನಿಷ್ಟ ಸವಲತ್ತು ಕೊಡಬೇಕೆಂದು ಮನವಿ ಮಾಡಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು (ಮಂಗಳವಾರ ಸೆ. 30) ವಿಚಾರಣೆ ನಡೆಸಿತು. ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದಿಸಿದರು. ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು.
ವಾದ ಮಂಡಿಸಿದ ಸುನಿಲ್ ಕುಮಾರ್, ಕೋರ್ಟ್ ಆದೇಶವನ್ನು ಯಾಕೆ ಪಾಲನೆ ಮಾಡ್ತಾ ಇಲ್ಲ? ಇಡೀ ದೇಶದಲ್ಲಿ ಫಾಲೋಅಪ್ ಮಾಡದೇ ಇರೋದು ದರ್ಶನ್ ಕೇಸ್ ಅಲ್ಲಿ ಏಕೆ? 45 ದಿನದಿಂದ ಕ್ವಾರಂಟೈನ್ ಅಲ್ಲಿ ಇದ್ದಾರೆ. ರೇಪಿಸ್ಟ್ ಉಮೇಶ್ ರೆಡ್ಡಿಗೆ ವಿಐಪಿ ಟ್ರಿಟ್ಮೆಂಟ್ ಕೊಡ್ತಾ ಇದ್ದಾರೆ. ಇದನ್ನೂ ಓದಿ: ದರ್ಶನ್ ಮನೆಯಲ್ಲಿ ಕಳ್ಳತನ
ಉಮೇಶ್ ರೆಡ್ಡಿಗೆ ಎಲ್ಲಾ ಸೌಲಭ್ಯವೂ ಇದೆ. ವಿಐಪಿ ಟ್ರೀಟ್ಮೆಂಟ್ ಅಲ್ಲಿ ಇದ್ದಾನೆ. ಕ್ವಾರಂಟೈನ್ ಅನ್ನೋ ಪದ ಜೈಲ್ ಮ್ಯಾನ್ಯುಯಲ್ ಅಲ್ಲಿ ಇದ್ದರೆ ಅರ್ಜಿ ಹಿಂಪಡೆಯುತ್ತೇನೆ. ಜೈಲ್ ಮ್ಯಾನ್ಯುಯಲ್ ಅಲ್ಲಿ ಒಮ್ಮೆ ಅಲ್ಲ 11 ಕಡೆ ಪದ ಇದೆ. ಕ್ವಾರಂಟೈನ್ ಅಲ್ಲಿ ಇಡೋದು ಜೈಲಾಧಿಕಾರಿಗಳಿಗೆ ಬಿಟ್ಟಿದ್ದು, ಅವರ ಒತ್ತಾಯ ಏನು ಎಂದು ಪ್ರಶ್ನಿಸಿದರು.
ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಜೈಲ್ ಮ್ಯಾನ್ಯುಯಲ್ ಪ್ರಕಾರವೇ ಎಲ್ಲವನ್ನೂ ಕೊಡಲಾಗ್ತಿದೆ. ಕಂಬಳಿ, ಬೆಡ್ ಶೀಟ್, ಚೊಂಬು ತಟ್ಟೆ ಎಲ್ಲವನ್ನೂ ಕೊಡಲಾಗಿದೆ. ಹಾಸಿಗೆಯನ್ನು ಕೊಡಲು ಅವಕಾಶ ಇಲ್ಲ. ಪಲ್ಲಂಗ ಕೊಡಿ ಮಲಗಿಸಬೇಕು ಅಂದ್ರೆ ಆಗೋದಿಲ್ಲ. ವಾಕಿಂಗ್ ಮಾಡೋದಕ್ಕೆ ಅವಕಾಶ ಕೊಡಲಾಗಿದೆ. ಇದೇ ಸೆಲ್‌ನಲ್ಲಿ ಇರಬೇಕು ಅಂತ ಕೇಳೋ ಅಧಿಕಾರ ಆರೋಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
The post ಜೈಲಲ್ಲಿ ರೇಪಿಸ್ಟ್ ಗಳಿಗೆ ವಿಐಪಿ ಸೌಲಭ್ಯ ಕೊಡ್ತಾರೆ ಆದ್ರೆ ದರ್ಶನಗೆ ಏನೂ ಇಲ್ಲ! appeared first on .

