ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಬರದಿಂದ ಸಾಕುತ್ತಿದ್ದು, ಜಾತಿಗಣತಿಗೆ ಕೆಲ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಆರೋಪಿಸಿತ್ತು.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಬಿಜೆಪಿಯು ಯಾವತ್ತು ವಿರೋಧಿಸಿಲ್ಲ ಇನ್ಮುಂದೆ ಕೂಡ ವಿರೋಧಿಸುತ್ತಿಲ್ಲ ಎಂದು ಸಿ.ಟಿ ರವಿ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಜಾತಿಗಣತಿ ವಿರೋಧ ಮಾಡಲ್ಲ ಎಂದರು. ಜಾತಿಗಣತಿಗೆ ಬಿಜೆಪಿಯ ವಿರೋಧ ಇಲ್ಲ. ಜಾತಿಗಣತಿ ಹೆಸರಿನಲ್ಲಿ ಸಮಾಜ ಒಡೆಯೋಕೆ ಮಾತ್ರ ನಮ್ಮ ವಿರೋಧ ಇದೆ. ಜಾತಿ ಒಡೆಯೋದು, ಹೊಸ ಜಾತಿ ಸೃಷ್ಟಿ ಮಾಡೋದು, ಹಿಂದೂ ಜಾತಿಗಳನ್ನ ಕ್ರಿಶ್ಚಿಯನ್ ಜಾತಿಗೆ ಸಮೀಕರಣ ಮಾಡೋದು. ಹಿಂದೂಗಳನ್ನ ಒಡೆಯುವುದು, ಒಳ ಜಾತಿ ಒಡೆಯೋದಕ್ಕೆ ನಮ್ಮ ವಿರೋಧ ಇದೆ. ಸಮೀಕ್ಷೆಗೆ ವಿರೋಧ ಇಲ್ಲ ಎಂದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ
ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ. ನಿಮಗೆ ಅದರ ಬದ್ಧತೆ ಇಲ್ಲ. ಕಾಂಗ್ರೆಸ್ನವರಿಗೆ ಬದ್ಧತೆ ಇಲ್ಲ. ಕಾಂಗ್ರೆಸ್ನವರಿಗೆ ಬದ್ಧತೆ ಇದ್ದಿದ್ದರೆ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಹಾಕುತ್ತಿದ್ದರು? ನಾಗಮೋಹನ್ ದಾಸ್ ವರದಿ ಯಾಕೆ ತಿಪ್ಪೇಗುಂಡಿಗೆ ಸೇರುತ್ತಿತ್ತು? ನಿಮಗೆ ಬದ್ಧತೆ ಇಲ್ಲ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಆದರೆ ಬಿಜೆಪಿ ನಿರ್ಣಯ ತೆಗೆದುಕೊಂಡಿದೆ, ಜಾತಿಗಣತಿಗೆ ನಮ್ಮ ವಿರೋಧ ಇಲ್ಲ ಎಂದು ತಿಳಿಸಿದರು.
The post ಕಾಂಗ್ರೆಸ್ನವರಿಗೆ ಬದ್ಧತೆ ಇಲ್ಲ: ಸಿ.ಟಿ ರವಿ appeared first on .

