ಪ್ರಕೃತಿ ಪ್ರತಿಯೊಬ್ಬರ ಆಸ್ತಿ: ಡಿಕೆಶಿ

Praja vahini
1 Min Read


postviews: 5

ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಮುಂಭಾಗ ಗುರುವಾರ ಮುಂಜಾನೆ ಏರ್ಪಡಿಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಹಾಗೂ ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕೃತಿ ಪ್ರತಿಯೊಬ್ಬರ ಆಸ್ತಿ. ಈ ಸಂಪತ್ತನ್ನು ಇಂದಿನ ಯುವಪೀಳಿಗೆ ಕಾಪಾಡಬೇಕು ಎಂದರು.

ನಮ್ಮ ರಾಜ್ಯ ಅರಣ್ಯ ಮತ್ತು ಪ್ರಕೃತಿ ಸಂಪತ್ತಿನ ನಾಡು. ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ ಮೂಲಕ ಶಕ್ತಿ ತುಂಬಲು ಬಂದಿರುವ ಎಲ್ಲಾ ವನ್ಯ ಪ್ರೇಮಿಗಳಿಗೆ ಅಭಿನಂದನೆಗಳು. ಕಾಡು ಈಗ ನಾಡು ಆಗಿದೆ. ಕಾಡು ಉಳಿದರೆ ಮಾತ್ರ ನಾಡು ಉಳಿದೀತು. ನಮ್ಮ ಸಂಸ್ಕೃತಿ, ನಮ್ಮ ಪ್ರಕೃತಿಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಹೋರಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ದುರ್ಗೆ ಎಂದರೆ ಶಕ್ತಿ, ಗಾಂಧಿ ಎಂದರೆ ಶಾಂತಿ: ಡಿಕೆಶಿ

ಈ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಖ್ಯಾತ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಮತ್ತಿತರರು ಭಾಗವಹಿಸಿದ್ದರು.

source

Share This Article