postviews: 5
ಬೆಂಗಳೂರು: ಇಷ್ಟು ದಿನ ನೆನೆಗುದಿಗೆ ಬಿದ್ದಿದ್ದ ಬಿಬಿಎಂಪಿ ಚುನಾವಣೆಗೆ ತೆರೆಮರೆಯಲ್ಲಿ ಸಿದ್ದತೆ ನಡೆಯುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇಷ್ಟು ದಿನ ಬಿಬಿಎಂಪಿ ಇದ್ದದ್ದು ಈಗ ಜಿಬಿಎ ಆಗಿದೆ. ಜಿಬಿಎ ಆದ ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಲು ಮುಂದಾಗಿದೆ ಎಂಬುವುದು ಇದೀಗ ತಿಳಿದುಬಂದಿದೆ. ಇದಕ್ಕೆ ದೊಡ್ಡ ಉದಾಹರಣೆ ಎಂಬಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹೇಳಿರುವ ಮತ್ತೆ ಸಾಕ್ಷಿಯಾಗಿದೆ.
ಹೌದು, ಜಿಬಿಎ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಬಿಎ ಚುನಾವಣೆ ಹಿನ್ನಲೆಯಲ್ಲಿ ಇದೇ ಅ.12ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ನಡೆಸೋದಕ್ಕೆ ಸಿದ್ಧತೆ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಗ್ಗಟ್ಟಿನಿಂದ ಸಂಘ ಮುನ್ನಡಿಸಿ
ಬೆಂಗಳೂರಿನಲ್ಲಿ ಈ ಬಾರಿ 50-60 ಸೀಟು ಪಡೆಯುವ ಸಿದ್ಧತೆ ಮಾಡಿದ್ದೇವೆ. ಹೀಗಾಗಿ ಅ.12ರಂದು 50 ಸಾವಿರ ಮಹಿಳೆಯರನ್ನ ಸೇರಿಸಿ ಸಮಾವೇಶ ಮಾಡ್ತೀವಿ ಎಂದಿದ್ದಾರೆ.

