ಡಿವೈಎಸ್ಪಿ ನಂಜುಂಡಯ್ಯಯಿಂದ ಕೋಟಿ ಕೋಟಿ ವಂಚನೆ ಆರೋಪ

Praja vahini
1 Min Read

ಬೆಂಗಳೂರು: DAR ಡಿವೈಎಸ್ಪಿ ನಂಜುಂಡಯ್ಯಯಿಂದ ಕೋಟಿ ಕೋಟಿ ವಂಚನೆ ಆರೋಪದ ಮೇಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಸಂಬಂಧ DAR ಡಿವೈಎಸ್ಪಿ ನಂಜುಂಡಯ್ಯರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು.

ಸಂಬಂಧಿಕರ ಬಳಿ 9 ಎಕರೆ ಜಮೀನು ಡೆವಲಪ್ ಮಾಡುವುದಾಗಿ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ದೂರು ದಾಖಲಾಗಿ DAR ಡಿವೈಎಸ್ಪಿ ನಂಜುಂಡಯ್ಯರನ್ನ ಕರೆತಂದ ಪೊಲೀಸರು. ಈ ವೇಳೆ ವಂಚನೆಗೊಳಗಾದ ಕುಟುಂಬಗಳು ಠಾಣೆ ಮುಂದೆ ಜಮಾವಣೆಯಾಗಿದ್ದಾರೆ.

ಇನ್ನು ಸಾಕಷ್ಟು ಜನರಿಗೆ ಸುಮಾರು 30-40 ಕೋಟಿ ವಂಚನೆ ಆರೋಪ ಕೇಳಿ ಬಂದಿದೆ. ಕೋಟಿ ಕೋಟಿ ರೂಪಾಯಿ ವಂಚನೆಯಲ್ಲಿ ಭಾಗಿಯಾಗಿರುವ DAR ಡಿವೈಎಸ್ಪಿ ನಂಜುಂಡಯ್ಯ ಹಾಗೂ ಕುಟುಂಬವು ಸಂಬಂಧಿಗಳಿಗೆ ಸಾಕಷ್ಟು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ಇದನ್ನೂ ಓದಿ: ತನಿಖೆಗೂ ಲಂಚ ಕೇಳುತ್ತಿರುವ ಪಿಎಸ್‌ಐ

ಬೇರೆಯವರ ಸಹಿ ಫೋರ್ಜರಿ ಮಾಡಿ ಒಂದೇ ಸೈಟ್ ಗಳನ್ನ ಹಲವರಿಗೆ ಅಗ್ರಿಮೆಂಟ್ ಮಾಡಿದ್ದಾರೆ. ಮಾಲೀಕರ ಗಮನಕ್ಕೆ ಬರದಂತೆ ಸೈಟ್ ಅಗ್ರಿಮೆಂಟ್ ಮಾಡಿರುವ ಡಿವೈಎಸ್ಪಿ ನಂಜುಂಡಯ್ಯ. ಪ್ರಶ್ನೆ ಮಾಡಿದಕ್ಕೆ ಬೆದರಿಕೆ ಹಾಕುತ್ತಾರೆ ಎಂದು  ಆರೋಪ ಕೇಳಿ ಬಂದಿದೆ. ಅಣ್ಣನ ಮಗ ಮೋಹನ್ ಎಂಬುವವರಿಗೆ ವಂಚನೆ ಮಾಡಿದ್ದಾರೆ. ಪ್ರಕರಣವೊಂದರಲ್ಲಿ ಸಸ್ಪೆಂಡ್ ನಲ್ಲಿರುವ ಡಿವೈಎಸ್ಪಿ ನಂಜುಂಡಯ್ಯ. ಸದ್ಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು.

source

Share This Article