ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಫೇಕ್ ಔಷಧಿಗಳು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕಂಡುಬರುತ್ತಿದ್ದು, ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ಅಡ್ಡ ಪರಿಣಾಮ ಬೀರಿ ಅದೆಷ್ಟೋ ಜೀವಗಳು ಬಲಿಯಾಗಿರೋದು ಉದಾಹರಣೆಗಳಿವೆ.
ಅದರಂತೆ ಇದೀಗ ಕೆಮ್ಮಿನ ಔಷಧಿಯನ್ನು ಸೇವಿಸಿ ಸುಮಾರು 11 ಮಕ್ಕಳು ಸಾವನ್ನಪ್ಪಿರುವ ಘಟನೆ ವೈದ್ಯಕೀಯ ಲೋಕವನ್ನೇ ಬೆಚ್ಚಿ ಬೀಳಿಸಿದೆ.
ಹೌದು, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳು ಕೆಮ್ಮಿನ ಔಷಧಿಯನ್ನು ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ. ಕೆಲವರು ವೈದ್ಯರು ನೀಡಿದ ಸಿರಪ್ ಸೇವಿಸಿದ್ದರೆ ಇನ್ನು ಕೆಲವರು ನೇರವಾಗಿ ಮೆಡಿಕಲ್ ಶಾಪ್ನಿಂದ ಸಿರಪ್ ಖರೀದಿಸಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ಪರೀಕ್ಷೆಯಲ್ಲಿ ಮಾದರಿಗಳಲ್ಲಿ ಯಾವುದೇ ವಿಷಕಾರಿ ರಾಸಾಯನಿಕಗಳು ಕಂಡುಬಂದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಜಾತಿಗಣತಿ ಅವಧಿ ಮುಂದೂಡುತ್ತಾ ರಾಜ್ಯ ಸರ್ಕಾರ?
ಇನ್ನು ಈ ಕುರಿತು ಆರೋಗ್ಯ ಸಚಿವರಾಗಿರುವಂತಹ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿದ್ದು, ನಾವು ಈಗಾಗಲೇ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿದೇವೆ. ತಮಿಳುನಾಡು, ಪಾಂಡಿಚೆರಿ, ರಾಜಸ್ಥಾನ ಸೇರಿದಂತೆ ಈ ಕೆಮ್ಮಿನ ಔಷಧಿ ಸರಬರಾಜು ಆಗಿದೆ ಎಂಬ ಮಾಹಿತಿ ಇದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೋಲ್ಡ್ರೀಫ್ ಸರಬರಾಜು ಆಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಬೇರೆ ಬ್ರ್ಯಾಂಡ್‌ಗಳನ್ನ ಸ್ಯಾಂಪ್ ತೆಗೆದುಕೊಡು ಟೆಸ್ಟ್ ಮಾಡ್ತಾ ಇದ್ದೇವೆ. ವರದಿ ಬಂದ ನಂತರ ಅದರ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ.
ಅಲ್ಲದೆ ತಮಿಳುನಾಡಲ್ಲಿ ಕೆಲ ಜಿಲ್ಲೆಗಳಲ್ಲಿ ಮಾತ್ರ ಸರಬರಾಜು ಆಗಿದ್ದು, ಹೀಗಾಗಿ ಕರ್ನಾಟಕಕ್ಕೆ ಯಾವುದೇ ರೀತಿ ಪರಿಣಾಮ ಬೀರಲ್ಲ ಎಂದು ಭರವಸೆ ನೀಡಿದರು.

