ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿಯ ಸಮೀಕ್ಷೆ ಬರದಿಂದ ಸಾಗುತ್ತಿದ್ದು, ಈ ಜಾತಿಗಣತಿಗೆ ಅಕ್ಟೋಬರ್ 7 ಕೊನೆಯ ದಿನವಾಗಿದ್ದು ಇನ್ನೂ ಕೂಡ ಕೆಲವು ಕಡೆ ಜಾತಿಗಳು ಸಂಪೂರ್ಣವಾಗಿಲ್ಲ. ಹಾಗಾದ್ರೆ ಜಾತಿಗಣತಿಯನ್ನು ರಾಜ್ಯ ಸರ್ಕಾರ ಮುಂದೂಡುತ್ತಾ ಅಥವಾ ನಾಳೆಯೇ ಅಂತಿಮವಾಗಿ ಮುಕ್ತಾಯಗೊಳಿಸುತ್ತಾ ಎಂಬುದೇ ಎಲ್ಲರಲ್ಲಿ ಪ್ರಶ್ನೆ ಕಾಡುತ್ತಿದೆ.
ಹೌದು, ರಾಜ್ಯ ಸರ್ಕಾರದ ಜಾತಿ ಗಣತಿಗೆ ಇನ್ನೊಂದೇ ದಿನ ಬಾಕಿ ಇದೆ. ಹೀಗಾಗಿ ಸಮೀಕ್ಷೆ ಮಂಗಳವಾರಕ್ಕೆ ಅಂತ್ಯವಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಕ್ಟೋಬರ್ 7ರಂದೇ ಸಮೀಕ್ಷೆ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಸಮೀಕ್ಷೆಯ ವೇಗ ನೋಡಿದರೆ ಅಂದುಕೊಂಡ ಸಮಯದೊಳಗೆ ಮುಗಿಯುವುದು ಅನುಮಾನ ಎನ್ನಲಾಗಿದೆ.
ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆಗೆ ನಿಗದಿಪಡಿಸಿರುವ ಒಟ್ಟು ಕುಟುಂಬ ಅಥವಾ ಮನೆಗಳ ಸಂಖ್ಯೆ 1,43,77,978 ಆಗಿದೆ. ಭಾನುವಾರದ ಮಾಹಿತಿ ಇನ್ನು ಲಭ್ಯವಾಗದೇ ಇರುವುದರಿಂದ, ಸದ್ಯ ಬಿಡುಗಡೆ ಆಗಿರುವ ಮಾಹಿತಿ ಪ್ರಕಾರ ಅಕ್ಟೋಬರ್ 4ರವರೆಗೆ ರಾಜ್ಯದಲ್ಲಿ ಒಟ್ಟು 1,2,83,172 ಮನೆಗಳ ಸಮೀಕ್ಷೆ ನಡೆಸಲಾಗಿದೆ. ಇನ್ನೂ ಸಮೀಕ್ಷೆ ನಡೆಸಬೇಕಾದ ಮನೆಗಳ ಸಂಖ್ಯೆ 40,94,806 ಇದೆ. ಇದನ್ನೂ ಓದಿ: ಫಾಕ್ಸ್‌ಕಾನ್ ಕಂಪನಿ 2ನೇ ಅತಿದೊಡ್ಡ ಘಟಕವಾಗಿದೆ: ಸಿಎಂ

